ಚಂದನವನ (sandalwood)


Join the forum, it's quick and easy

ಚಂದನವನ (sandalwood)
ಚಂದನವನ (sandalwood)
Would you like to react to this message? Create an account in a few clicks or log in to continue.

Hlf yearly report

Go down

Hlf yearly report Empty Hlf yearly report

Post by Admin Fri Jun 29, 2012 11:50 pm

ಜನವರಿಯಿಂದ ಜೂನ್‌ವರೆಗೆ ಸುಮಾರು 52 ಚಿತ್ರಗಳು ತೆರೆಕಂಡಿವೆ. ಅದರಲ್ಲಿ ಎಷ್ಟು ನಿರ್ಮಾಪಕರಿಗೆ ಹಣ ವಾಪಸ್ಸು ಬಂದಿದೆ? ಎಷ್ಟು ಲಾಸ್ ಆಗಿದೆ ಎಂಬ ಲೆಕ್ಕ ನೋಡಿದರೆ ಹಾರ್ಟ್ ಫೇಲ್ ಆಗುತ್ತದೆ. ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಜಸ್ಟ್ ಪಾಸ್ ಕೂಡ ಆಗಿಲ್ಲ ಎನ್ನುವುದು ದುರಂತದ ಸಂಗತಿ.

ಸ್ಯಾಂಡಲ್‌ವುಡ್ ಫೇಲ್- ಅರ್ಧ ವಾರ್ಷಿಕ ಪರೀಕ್ಷೆ ರಿಸಲ್ಟ್ ಅನೌನ್ಸ್ ಆಗಿದ್ದು ಪ್ರೇಕ್ಷಕರು, ಉದ್ಯಮದ ಮಂದಿ ಸ್ಯಾಂಡಲ್‌ವುಡ್‌ಗೆ 100 ಅಂಕಗಳಿಗೆ 20 ಅಂಕ ಕೊಟ್ಟಿದ್ದಾರೆ. ಅಲ್ಲಿಗೆ ಸ್ಯಾಂಡಲ್‌ವುಡ್‌ಗೆ ಜಸ್ಟ್ ಪಾಸ್ ಆಗಲು ಸಾಧ್ಯವಾಗಿಲ್ಲ. 2012 ಜನವರಿಯಿಂದ ಜೂನ್ ಅಂತ್ಯದವರೆಗೂ ಸುಮಾರು 52 ಚಿತ್ರಗಳು ತೆರೆಕಂಡಿವೆ. ಅದರಲ್ಲಿ ನಿರ್ಮಾಪಕರಿಗೆ ಹಾಕಿದ ಹಣ ವಾಪಸ್ಸು ಬಂದಿರುವುದು ಬರೀ 6 ರಿಂದ 7 ನಿರ್ಮಾಪಕರಿಗೆ ಮಾತ್ರ. ಉಳಿದ ಎಲ್ಲ ನಿರ್ಮಾಪಕರ ಕೈಗೆ ಚೊಂಬು ಸಿಕ್ಕಿದೆ.

52 ಚಿತ್ರಗಳಿಂದ ಸ್ಯಾಂಡಲ್‌ವುಡ್‌ಗೆ ಸುಮಾರು 125 ಕೋಟಿ ರೂ ಹಣ ಹರಿದು ಬಂದಿದೆ. ಅದರಲ್ಲಿ ನಿರ್ಮಾಪಕರಿಗೆ 35 ರಿಂದ 40 ಕೋಟಿ ಹಣ ವಾಪಸ್ಸಾಗಿದೆ. ಉಳಿದದ್ದು ಎಲ್ಲಿ ಹೋಗಿದೆ ಆ ದೇವರೇ ಬಲ್ಲ.

ಈ ವರ್ಷ ಭರ್ಜರಿ ವ್ಯಾಪಾರ ಮಾಡಿದ ಚಿತ್ರಗಳಲ್ಲಿ ಚಿಂಗಾರಿ, ಗೋವಿಂದಾಯ ನಮಃ, ಅಣ್ಣಾ ಬಾಂಡ್ ಚಿತ್ರಗಳಿವೆ. ಚಿಂಗಾರಿ ಚಿತ್ರ ನಿರ್ಮಾಪಕರಿಗೆ ಲಾಭ ತಂದು ಕೊಟ್ಟಿತು. ಆದರೆ ವಿತರಕರಿಗೆ ಲಾಸ್ ಆಯಿತು. ಗೋವಿಂದಾಯ ನಮಃ ಚಿತ್ರ ನಿರ್ಮಾಪಕ ಹಾಗೂ ವಿತರಿಕರಿಗೆ ಲಾಭ ತಂದು ಕೊಟ್ಟಿದೆ. ಅಣ್ಣಾ ಬಾಂಡ್ ಚಿತ್ರ ನಿರ್ಮಾಪಕರಿಗೆ ಭರ್ಜರಿ ಹಣ ತಂದು ಕೊಟ್ಟಿತು. ಆದರೆ ವಿತರಕರು ಇನ್ನೂ ಹಣ ಬಂದಿಲ್ಲ.

ಎ ಗ್ರೇಡ್ ನಟರ ಚಿತ್ರಗಳ ನಿರ್ಮಾಪಕರಿಗೆ ಹೆಚ್ಚು ಲಾಸ್ ಆಗಿಲ್ಲ, ಅಷ್ಟೇ ಅಲ್ಲ ಹೆಚ್ಚು ಲಾಭ ಕೂಡ ಬಂದಿಲ್ಲ. ಆದರೆ ಬಿ ಮತ್ತು ಸಿ ಗ್ರೇಡ್ ನಟರ ಚಿತ್ರಗಳ ನಿರ್ಮಾಪಕರಿಗೆ ಚಿತ್ರಮಂದಿರದಿಂದ ಹಣ ಬಂದಿಲ್ಲ. ಹಾಗಾಗಿ ಶೇಕಾಡವಾರು ನಿರ್ಮಾಪಕರಿಗೆ ನಷ್ಟವಾಗಿದೆ.

ಹೊಸ ಶೈಲಿಯ ಚಿತ್ರಕಥೆ ಇಟ್ಟುಕೊಂಡು ಸಿನಿಮಾ ಮಾಡಿ ಸೋತವರಲ್ಲಿ ಸಿದ್ಲಿಂಗು ಚಿತ್ರವಿದೆ. 'ಕಠಾರಿವೀರ ಸುರಸುಂದರಾಂಗಿ' ಚಿತ್ರ ತ್ರಿಡಿ ಎಂಬ ಕಾರಣಕ್ಕೆ ಸುದ್ದಿಗೆ ಬಂತೇ ಹೊರತು ಗುಣಮಟ್ಟದಲ್ಲಿ ಅದು ಹಿಂದೆ ಬಿತ್ತು. ಉಳಿದ ಬಹುತೇಕ ಚಿತ್ರಗಳು ಸೋಲುವುದಕ್ಕೆ ಕಾರಣ ಗಟ್ಟಿ ಕತೆ, ಚಿತ್ರಕತೆ ಇಲ್ಲದೇ ಇರುವುದು. ಎ ಶ್ರೇಣಿಯ ಹೀರೋಗಳು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಎಂದಿನಂತೆ ಪುನೀತ್ ಬಾಕ್ಸ್ ಆಫೀಸ್ ಹೀರೋ. ನಾಯಕಿಯರ ಪಟ್ಟಿಯಲ್ಲಿ ಲಕ್ಕಿ ಹಾಗೂ 'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲಿ ನಟಿಸಿದ್ದ ರಮ್ಯಾ ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ.

ಲಾಭ ತಂದ ಚಿತ್ರಗಳು

ಚಿಂಗಾರಿ - 7.5 ಕೋಟಿ ( ವಿತರಕ ಲಾಸ್)

ಕಠಾರಿವೀರ ಸುರಸುಂದರಾಂಗಿ -7 ಕೋಟಿ (ಗಳಿಕೆ ಅಲ್ಲಿಗಲ್ಲಿಗೆ)

ಗೋವಿಂದಾಯ ನಮಃ - 5 ಕೋಟಿ

ಭೀಮಾ ತೀರದಲ್ಲಿ - 3.5 ಕೋಟಿ ( ವಿತರಕ ಲಾಸ್)

ಅಣ್ಣಾ ಬಾಂಡ್ 8.5 ಕೋಟಿ

ಜಾನೂ - 2 ಕೋಟಿ ( ವಿತರಕ ಲಾಸ್)

ನರಸಿಂಹ 1.75 ಕೋಟಿ ( ನಿರ್ಮಾಪಕ ಲಾಸ್)

ಅಲೆಮಾರಿ 2 ಕೋಟಿ ( ನಿರ್ಮಾಪಕ ಲಾಸ್)

ಟಾಪ್ ಹಿಟ್ ಚಿತ್ರಗಳು

ಅಣ್ಣಾ ಬಾಂಡ್ 6 ಕೋಟಿ ಬಜೆಟ್ 8.5 ಕೋಟಿ ಕಲೆಕ್ಷನ್ ( 3.5 ಕೋಟಿ ರೂ. ಸೆಟೆಲೈಟ್ಸ್ ರೈಟ್ಸ್‌ನಿಂದ ಬಂದಿದೆ)

ಗೋವಿಂದಾಯ ನಮಃ- 1.5 ಕೋಟಿ ಬಜೆಟ್ 5 ಕೋಟಿ ಕಲೆಕ್ಷನ್

ಕಠಾರಿವೀರ ಸುರಸುಂದರಾಂಗಿ 9 ಕೋಟಿ ಬಜೆಟ್ 7 ಕೋಟಿ ಕಲೆಕ್ಷನ್ ( 3 ಕೋಟಿ ಸೆಟೆಲೈಟ್ ರೈಟ್ಸ್‌ನಿಂದ ಬಂದಿದೆ)

ಪ್ರಮುಖ ಟಾಪ್ ಫ್ಲಾಪ್ ಚಿತ್ರಗಳು

ಮುಂಜಾನೆ- ನಿರ್ಮಾಪಕರಿಗೆ 1 ಕೋಟಿ ಲಾಸ್

ದೇವ್ ಸನ್ ಆಫ್ ಮುದ್ದೇಗೌಡ - ಜೀರೋ ಕಲೆಕ್ಷನ್

ಆರಕ್ಷಕ - ನಿರ್ಮಾಪಕರಿಗೆ 4 ಕೋಟಿ ಲಾಸ್ 75 ಲಕ್ಷ ಕಲೆಕ್ಷನ್
Admin
Admin

Posts : 981
Join date : 2012-05-26
Age : 41
Location : Bangalore

https://sandalwood.forumotion.com

Back to top Go down

Back to top


 
Permissions in this forum:
You cannot reply to topics in this forum