ಚಂದನವನ (sandalwood)

ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

Go down

ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ Empty ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

Post by Admin on Sat Jun 09, 2012 9:46 am

ಹಾಟ್ ಸೀಟ್ ನಲ್ಲಿ ಕೂತ್ರೆ 25 ಲಕ್ಷ ಗೆಲ್ಲಬಲ್ಲೆ, ಪುನೀತ್


ಶುಕ್ರವಾರ, ಜೂನ್ 8, 2012, 12:03 [IST]

Thatskannada


ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆ ಒಪ್ಪಿಕೊಂಡಾಗ ನನಗಿದ್ದ ಆರಂಭದ ಭಯವೇನಂದರೆ ಪತ್ರಿಕೆಗಳದ್ದು.ನನ್ನ ಕನ್ನಡವನ್ನು ಕೇಳಿಸಿಕೊಂಡು ಎಲ್ಲಿ ಟೀಕಿಸಿ ಬಿಡುತ್ತಾರೋ ಎನ್ನೋ ಭಯವಿತ್ತು. ಮೊದಲಿಗಿಂತ ನನ್ನ ಜ್ಞಾನದಲ್ಲಿ ಎಷ್ಟೋ ವಿಸ್ತರಣೆಯಾಗಿದೆ.ನಾನೀಗ ಏನಾದರೂ ಹಾಟ್ ಸೀಟ್ ನಲ್ಲಿ ಕೂತರೆ ಪ್ರಾಯಶಃ 25 ಲಕ್ಷದವರೆಗೆ ಗೆಲ್ಲಬಲ್ಲೆ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದಾರೆ.

ಈಗ ನಾನು ಕಣ್ಣಿಗೆ ಬಿದ್ದ ಪುಸ್ತಕಗಳು ಖರೀದಿಸಿ ಓದುತ್ತಿದ್ದೇನೆ. ಹಾಗಾಗಿ ಈ ಕಾರ್ಯಕ್ರಮದ ನಂತರ ನನ್ನ ಜನರಲ್ ನಾಲೆಜ್ ಬಹಳ ಸುಧಾರಿಸಿದೆ. ಇದುವರೆಗೂ ಯಾವ ಸ್ಪರ್ಧಾಳುವೂ ಒಂದು ಕೋಟಿ ರೂಪಾಯಿ ಗೆದ್ದಿಲ್ಲ. ಯಾರಾದರೂ ಗೆದ್ದೇ ಬಿಟ್ಟರೆ ಆ ಉದ್ವೇಗವನ್ನು ಬಹುಷಃ ನನಗೆ ಭರಿಸಲಾಗುತ್ತದೋ ಇಲ್ಲವೋ ಎನ್ನುವ ಆತಂಕ ನನ್ನಲ್ಲಿದೆ ಎನ್ನುತ್ತಾರೆ ಪುನೀತ್.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಂತರ ಹೊಸತೊಂದು ಅಭಿಮಾನಿ ಬಳಗ ಪುನೀತ್ ಗೆ ಹುಟ್ಟು ಹಾಕಿದೆ. ಆರಂಭದಲ್ಲಿ ಖುದ್ದು ಅವರಿಗಿದ್ದ ಅಳುಕು ಈಗ ಸಾಕಷ್ಟು ಮರೆಯಾಗಿದೆ. ಅವರ ಆತ್ಮವಿಶ್ವಾಸ ಮತ್ತು ಜನರ ಜೊತೆ ಬೆರೆಯುವ ಗುಣ ಎರಡೂ ಈ ಕಾರ್ಯಕ್ರಮದಿಂದ ಸಾಕಷ್ಟು ಉತ್ತಮಗೊಂಡಿದೆ.

ಜನ ಸ್ವೀಕರಿಸುತ್ತಾರೋ ಇಲ್ಲವೋ ಅನ್ನುವ ಭಯ ನನ್ನನ್ನು ಕಾಡುತ್ತಿತ್ತು. ಈ ಕಾರ್ಯಕ್ರಮದ ನಂತರ ನನ್ನನ್ನು ಇಷ್ಟ ಪಡುವವರ ಸಂಖ್ಯೆ ಮತ್ತಷ್ಟು ವೃದ್ದಿಯಾಗಿದೆ. ಕಾರ್ಯಕ್ರಮದಲ್ಲಿ ಎಲ್ಲರನ್ನೂ ಚೆನ್ನಾಗಿ ಮಾತನಾಡಿಸಿ ಎಲ್ಲರನ್ನೂ ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ನಾನು ಮಾಡುತ್ತಿರುವ ನಿರೂಪಣೆ ಗೆದ್ದಿದೆ ಎನ್ನುವ ಸಂತೋಷ ನನಗಿದೆ ಎಂದು ಪುನೀತ್ ಹೇಳಿದ್ದಾರೆ.

ನನ್ನ ಕನ್ನಡ ಉಚ್ಚಾರಣೆಯ ಬಗ್ಗೆ ಭಯವಿತ್ತು. ಮಾಧ್ಯಮಗಳು ನನ್ನನ್ನು ತಿದ್ದಿ ಎಚ್ಚರಿಸುವಂತೆ ಸುಧಾರಣೆಯಾಗುವಂತೆ ಬೆಂಬಲ ನೀಡಿದವು. ಕಾರ್ಯಕ್ರಮ 50 ಎಪಿಸೋಡ್ ಯಶಸ್ವಿಯಾಗಿ ಮುಗಿಸಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಮರೆಯಾಲಾಗದ ಕ್ಷಣ ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ.

ಪವರ್ ಸ್ಟಾರ್ ಪುನೀತ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಜುಗಲ್ಬಂಧಿಯ ಈ ವಿಶೇಷ ಸಂಚಿಕೆ ಮಂಗಳವಾರ, ಜೂನ್ 05ರಂದು ಪ್ರಸಾರವಾಗಿತ್ತು. ರವಿಚಂದ್ರನ್ 'ಕನ್ನಡದ ಕೋಟ್ಯಧಿಪತಿ' ಶೋನಲ್ಲಿ ಭಾಗವಹಿಸಿದ ಮೂರನೇ ಸೆಲೆಬ್ರಿಟಿ. ಇದಕ್ಕೂ ಮೊದಲು ಗೋಲ್ಡನ್ ಗರ್ಲ್ ರಮ್ಯಾ ಸಹ ಕೋಟ್ಯಧಿಪತಿ ಶೋನಲ್ಲಿ ಭಾಗವಹಿಸಿ ರು.3,20,000 (ಮೂರು ಲಕ್ಷ ಇಪ್ಪತ್ತು ಸಾವಿರ ರುಪಾಯಿ) ಗೆದ್ದಿದ್ದರು.

ಇನ್ನು ಎರಡನೇ ಸೆಲೆಬ್ರಿಟಿಯಾಗಿ ಹಿರಿಯ ಪಂಚಭಾಷಾ ತಾರೆ ಲಕ್ಷ್ಮಿ, ಡಾ.ರಾಜಕುಮಾರ್ ಅವರ 84ನೇ ಹುಟ್ಟುಹಬ್ಬದ ನಿಮಿತ್ತ ಏಪ್ರಿಲ್ 24 ರಂದು ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
Admin
Admin

Posts : 983
Join date : 2012-05-26
Age : 36
Location : Bangalore

http://sandalwood.forumotion.com

Back to top Go down

ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ Empty ಕೋಟ್ಯಾಧಿಪತಿಯಲ್ಲಿ ರವಿಚಂದ್ರನ್ ಅಂತರಂಗ ಬಹಿರಂಗ

Post by Admin on Sat Jun 09, 2012 9:48 am

ಸ್ಪರ್ಧೆಯ ನಡುವೆ ರವಿಚಂದ್ರನ್ ತಮ್ಮ ಹಲವಾರು ಘಟನೆಗಳನ್ನು ಮೆಲುಕು ಹಾಕಿದರು. ತೆಲುಗು ಮೆಗಾ ಸ್ಟಾರ್ ಚಿರಂಜೀವಿಯನ್ನು 'ಸಿಪಾಯಿ' ಚಿತ್ರಕ್ಕೆ ಕರೆದುಕೊಂಡು ಬಂದದ್ದು. ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಂಗೀತ ಸಂಯೋಜನೆಯನ್ನು ಬಿಟ್ಟುಬಿಡು ಎಂದು ಸಲಹೆ ನೀಡಿದ್ದು ಎಲ್ಲವನ್ನೂ ನೆನಪಿಸಿಕೊಂಡರು.

ಚಿರಂಜೀವಿ ಅವರಿಗೆ ಫೋನ್ ಮಾಡಿ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವಂತೆ ಕೇಳಿದರಂತೆ. ಅದಕ್ಕೆ ಕೂಡಲೆ ಒಪ್ಪಿದ ಚಿರು ಎಷ್ಟು ದಿನ ಬೇಕು ಎಂದರಂತೆ. ಹದಿನೈದು ದಿನ ಕಾಲ್‌ಶೀಟ್ ಬೇಕು ಎಂದ ರವಿಗೆ ಅತಿಥಿ ಪಾತ್ರ ಎಂದರೆ ಮೂರು ದಿನ ಅಷ್ಟೇ ಅಲ್ವಾ. ಇಷ್ಟೊಂದು ಟೈಮ್ ಯಾಕೆ ಎಂದರಂತೆ. ಅಷ್ಟು ದಿನ ಬೇಕೆ ಬೇಕು ಸಾರ್ ನನಗೆ ಎಂದರಂತೆ.

ಸರಿ ಆಯ್ತು ಬರ್ತೀನಿ ಎಂದ ಚಿರಂಜೀವಿ ಅವರ ಸಂಭಾವನೆ ಕೇಳಿದರಂತೆ. ಅದಕ್ಕೆ ಚಿರು, ನೀನು ಎಷ್ಟು ಕೊಟ್ಟರೂ ತೆಗೆದುಕೊಳ್ಳುತ್ತೇನೆ ಎಂದರಂತೆ. ಬಳಿಕ ಒಮ್ಮೆ ರಜನಿಕಾಂತ್ ಅವರು ರವಿಚಂದ್ರನ್ ಅವರ ಮನೆಗೆ ಬಂದು ನೀನು ಸಂಗೀತ ನಿರ್ದೇಶನ ಮಾಡುವುದು ಸರಿಯಿಲ್ಲ. ಬಿಟ್ ಬಿಡೋ ನಿನಗೆ ಇದೆಲ್ಲಾ ಬೇಡ ಎಂದರಂತೆ.

ಇಲ್ಲಾ ಸಾರ್ ನಾನು ಯಾವುದೇ ಕಾರಣಕ್ಕೂ ಬಿಡಲ್ಲ. ಈ ದಾರಿಯಲ್ಲಿ ತುಂಬಾ ದೂರ ಬಂದಿದ್ದೇನೆ. ಈಗೀಗ ಇದು ಏನು ಎಂದು ಅರ್ಥವಾಗ ತೊಡಗಿದೆ. ಈಗ ಬಿಟ್ಟುಬಿಡು ಎಂದರೆ ಸಾಧ್ಯವಿಲ್ಲ ಎಂದರಂತೆ. ನಿನ್ನ ಸಂಗೀತವನ್ನು ಜನ ಇಷ್ಟಪಡ್ತಾ ಇಲ್ವೋ ಅದಕ್ಕೆ ಹೇಳ್ತಾ ಇದ್ದೀನಿ ಎಂದು ರಜನಿ ವಿನಂತಿಸಿಕೊಂಡರಂತೆ.

ಸರಿ ಈಗ ಒಂದು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದೇನೆ ಕೇಳು. ನಿನಗೆ ಇಷ್ಟವಿಲ್ಲ ಎಂದರೆ ಈಗಲೇ ಬಿಟ್ಟು ಬಿಡ್ತೇನೆ ಎಂದರಂತೆ ರವಿ. ಸರಿ ನಡಿ ಎಂದು ಹಾಡು ಕೇಳಿ ರಜನಿ ಎದ್ದು ಹೊರಟು ಬಿಟ್ಟರಂತೆ. ಬಳಿಕ ಯಾರದೋ ಕೈಯಲ್ಲಿ ಹೇಳಿಕಳಿಸಿದರಂತೆ. ಅವನ ಹಾಡು, ಸಂಗೀತ ತುಂಬಾ ಚೆನ್ನಾಗಿತ್ತು. ಚೆನ್ನಾಗಿಲ್ಲ ಎಂದು ಹೇಗೆ ಹೇಳಲಿ ಎಂದರಂತೆ.

ಬಳಿಕ ರವಿಚಂದ್ರನ್ ಮಾತನಾಡುತ್ತಾ ಇದುವರೆಗೂ ನಾನು ಕಣ್ಣೀರಿಟ್ಟಿದ್ದು ಎರಡೇ ವಿಷಯಕ್ಕೆ. ಒಂದು 'ಏಕಾಂಗಿ' ಚಿತ್ರದ ಸೋಲು. ಆ ಚಿತ್ರ ಯಾಕೆ ಸೋತಿತು ಎಂದು ಅರ್ಥ ಮಾಡಿಕೊಳ್ಳಲು ನಾನು ಆರು ತಿಂಗಳು ಮನೆ ಬಿಟ್ಟು ಕದಲಲಿಲ್ಲ. ಯಾಕೆ ಎಂದು ಅರ್ಥವಾಗಲಿಲ್ಲ.

ಈಗಲೂ ಅಷ್ಟೇ ನಮ್ಮ ಮನೆಯಲ್ಲಿ ಏಕಾಂಗಿ ಚಿತ್ರದ ಸಿಡಿ, ಹಾಡಾಗಲಿ ಏನೂ ಹಾಕುವುದಿಲ್ಲ. ಅಷ್ಟೊಂದು ಕೆಟ್ಟ ಪ್ರಭಾವ ಬೀರಿದೆ ಆ ಸಿನಿಮಾ ನನ್ನ ಜೀವನದಲ್ಲಿ ಎಂದರು. ಬಳಿಕ ಕಣ್ಣೀರಿಟ್ಟದ್ದು ಆಗಿನ ಕಾಲದಲ್ಲೇ ನಾಲ್ಕುವರೆ ಕೋಟಿ ಖರ್ಚು ಮಾಡಿದ್ದ 'ಶಾಂತಿ ಕ್ರಾಂತಿ' ಚಿತ್ರದ ಸೋಲು ಎಂದರು.

ಇದೇ ಸಂದರ್ಭದಲ್ಲಿ 'ಮಂಜಿನ ಹನಿ' ಚಿತ್ರದ ಬಗ್ಗೆಯೂ ಮಾತನಾಡಿದರು. 'ಮಂಜಿನ ಹನಿ' ಚಿತ್ರದ ಟ್ರೇಲರ್‌ನ್ನೂ ಶೋನಲ್ಲಿ ತೋರಿಸಲಾಯಿತು. ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಲ್ಲೂ ರವಿಚಂದ್ರನ್ ಉದ್ದಕ್ಕೆ ಕೂದಲು ಬಿಟ್ಟುಕೊಂಡಿರುವುದು ಅವರ ಅಭಿಮಾನಿಗಳಿಗೆ ಮತ್ತೆ ನಿರಾಶೆ ಮೂಡಿಸಿತು.

ಈ ಬಗ್ಗೆ ಮಾತನಾಡಿದ ರವಿಚಂದ್ರನ್, ಚಿತ್ರದ ಟೈಟಲ್ 'ಮಂಜಿನ ಹನಿ' ಎಂದರೆ ಎಲ್ಲರೂ ಇದೊಂದು ಪಕ್ಕಾ ಪ್ರೇಮ ಕತೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಮಂಜಿನಹನಿ ಎಂದರೆ ಮರಗಟ್ಟಿದ ಹೃದಯಗಳು ಮಂಜಿನಂತೆ ಕರಗಿ ನೀರಾಗಲಿ ಎಂಬುದು ಎಂದು ವಿವರಣೆ ನೀಡಿದರು. ಅಂದಹಾಗೆ ಈ ಶೋನಲ್ಲಿ ಗೆದ್ದ ಅಷ್ಟೂ ಹಣವನ್ನು ರವಿಚಂದ್ರನ್ ದಾನವಾಗಿ ನೀಡಲಿದ್ದಾರೆ. (ಒನ್‌ಇಂಡಿಯಾ ಕನ್ನಡ)
Admin
Admin

Posts : 983
Join date : 2012-05-26
Age : 36
Location : Bangalore

http://sandalwood.forumotion.com

Back to top Go down

ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ Empty ಕೋಟ್ಯಧಿಪತಿಯಲ್ಲಿ ರವಿಯನ್ನು ಕಾಪಾಡಿದ ಹಂಸಲೇಖ

Post by Admin on Sat Jun 09, 2012 9:53 am


ಕೋಟ್ಯಧಿಪತಿಯಲ್ಲಿ ರವಿಯನ್ನು ಕಾಪಾಡಿದ ಹಂಸಲೇಖ
ಬುಧವಾರ, ಜೂನ್ 6, 2012, 16:42 [IST]

[/justify]
ಸುವರ್ಣ ವಾಹಿನಿಯಲ್ಲಿ ಮಂಗಳವಾರ (ಜೂ 5) ಪ್ರಸಾರವಾದ 'ಕನ್ನಡದ ಕೋಟ್ಯಧಿಪತಿ' 50ನೇ ಕಂತು ಸಖತ್ ಮಜವಾಗಿತ್ತು. ಕಾರಣ ಹಾಟ್‌ಸೀಟಿನಲ್ಲಿ ಕೂತವರು ಕನ್ನಡ ಚಿತ್ರಗಳ ಕನಸುಗಾರ, ರಸಿಕ, ಒಂಟಿ ಸಲಗ, ಛಲ ಬಿಡದ ತ್ರಿವಿಕ್ರಮ, ಕ್ರೇಜಿಸ್ಟಾರ್, ದಿ ಶೋ ಮ್ಯಾನ್ ಖ್ಯಾತಿಯ ವೀರಾಸ್ವಾಮಿ ರವಿಚಂದ್ರನ್.

"ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ, ಇದು ಎಷ್ಟು ಸಾರಿ ಹಾಡಿದರು ಚೆನ್ನ, ಇದು ನಿಲ್ಲಲಾರದೆಂದು, ಕೊನೆಯಾಗಲಾರದೆಂದು, ಈ ಪ್ರೇಮಲೋಕದ ಗೀತೆಯು..." ಎಂದು 'ಪ್ರೇಮಲೋಕ' ಚಿತ್ರದ ಜನಪ್ರಿಯ ಗೀತೆಯನ್ನು ಪುನೀತ್ ಹಾಡುವ ಮೂಲಕ ರವಿಚಂದ್ರನ್‍‌ರನ್ನು ಕೋಟ್ಯಧಿಪತಿ ಶೋಗೆ ಆಹ್ವಾನಿಸಿದರು.

ಸರ್ ಫಸ್ಟ್ ಟೈಮ್ ಕನ್ನಡದಲ್ಲಿ ಕೋಟಿ ರುಪಾಯಿ ಬಜೆಟ್‌ ಸಿನಿಮಾ ಮಾಡಿದ ಖ್ಯಾತಿ ನಿಮ್ಮದು ಎಂದರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರವಿಚಂದ್ರನ್ ಕೋಟಿ ಖರ್ಚು ಮಾಡಿದ್ದು ನಾನೇ ಕೋಟಿ ರುಪಾಯಿ ಕಳೆದುಕೊಂಡಿದ್ದು ನಾನೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.

ನಾವು ಯಾವೊತ್ತೂ ಪ್ರೇಕ್ಷಕರನ್ನು ಅವರ ನೇರಕ್ಕೆ ನೋಡಬೇಕು. ನಾವು ಬೆಳೆದುಬಿಟ್ಟಿದ್ದೀವಿ ಎಂದು ಮೇಲಿನಿಂದ ನೋಡುವ ಪ್ರಯತ್ನ ಮಾಡಿದರೆ 'ಏಕಾಂಗಿ'ಯಾಗಿಬಿಡ್ತೀವಿ ಎಂದರು. ಈಶ್ವರಿ, ವಜ್ರೇಶ್ವರಿ ಎರಡೂ ಸೇರೋ ಏಕೈಕ ವೇದಿಕೆ 'ಕನ್ನಡದ ಕೋಟ್ಯಧಿಪತಿ' ಎಂದು ಪುನೀತ್ ಶೋಗೆ ಚಾಲನೆ ನೀಡಿದರು.

ಜನರಲ್ ನಾಲೆಡ್ಜ್‌ನಲ್ಲಿ ನಾನು ತುಂಬಾ ವೀಕು. ಯಾಕೆಂದರೆ ನಾನು ನನ್ನದೇ ಪ್ರಪಂಚದಲ್ಲಿ ಇದ್ದವನು. ತುಂಬಾ ಸರಳವಾದ ಪ್ರಶ್ನೆಗಳನ್ನು ಕೇಳು. ಯಾಕೆಂದರೆ ನಾನು ಸೋತರೆ ನಿನ್ನ ಮರ್ಯಾದೆ ಪ್ರಶ್ನೆ ಎಂದರು ರವಿಚಂದ್ರನ್.

ಈ ಮಾತಿಗೆ ಎದ್ದುಬಿದ್ದು ನಕ್ಕ ಪುನೀತ್, ಸರ್ ಫಸ್ಟ್ ಆಫ್ ಆಲ್ ನಾನು ಪೆದ್ದ ಸಾರ್. ಓದಿರೋದೆ ಹತ್ತನೇ ಕ್ಲಾಕು ಕರೆದುಕೊಂಡು ಬಂದು ಇಲ್ಲಿ ಕೂರಿಸಿದ್ದಾರೆ. ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಲೇ ಕಾರ್ಯಕ್ರಮ ಶುರುವಾಯಿತು.

ಪುನೀತ್ ಕೇಳಿದ ಪ್ರಶ್ನೆಗಳನ್ನು ರವಿಚಂದ್ರನ್ ಚೆನ್ನಾಗಿಯೇ ಉತ್ತರಿಸುತ್ತಿದ್ದರು. ಉತ್ತರ ಕಷ್ಟವೆನಿಸಿದಾಗಲೆಲ್ಲಾ ರವಿಚಂದ್ರನ್ ಹೆಲ್ಪ್ ಲೈನ್‍‌ಗೆ ಶರಣಾಗುತ್ತಿದ್ದರು. ಹಾಗೆ ಉತ್ತರಿಸುತ್ತಾ ಉತ್ತರಿಸುತ್ತಾ ಅವರು 11 ಪ್ರಶ್ನೆಯವರೆಗೂ ಬಂದು ತಲುಪಿದರು (ರು.6, 40000). ಆದರೆ ಹನ್ನೆರಡನೆ ಪ್ರಶ್ನೆಗೆ ಉತ್ತರ ಗೊತ್ತಾಗದೆ ಅವರು ಫೋನ್ ಮಾಡಿದ್ದು ಯಾರಿಗೆ ಗೊತ್ತೇ?

ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಜೊತೆ ಯಶಸ್ವಿ ಚಿತ್ರಗಳನ್ನು ಕೊಟ್ಟಂತಹ ಹಂಸಲೇಖ ಅವರಿಗೆ. ಈ ಪ್ರಶ್ನೆಗೆ ಉತ್ತರಿಸಲು ತಮ್ಮದೇ ಆದಂತಹ ಸಮಯವನ್ನು ತೆಗೆದುಕೊಳ್ಳಲು ಪುನೀತ್ ವಿಶೇಷ ವಿನಾಯಿತಿಯನ್ನು ರವಿಚಂದ್ರನ್‌ಗೆ ಕೊಟ್ಟರು.

ಕೂಡಲೆ ರವಿಚಂದ್ರನ್ ಪ್ರಶ್ನೆಯನ್ನು ಹಂಸಲೇಖ ಅವರಿಗೆ ಕೇಳಿದರು. ಪ್ರಶ್ನೆ ಹೀಗಿತ್ತು. 1898ರಲ್ಲಿ ಬೆಂಗಳೂರಿಗೆ ಪ್ಲೇಗ್ ಬಂದಾಗ ಮಲ್ಲೇಶ್ವರಂ ಜೊತೆ ಮತ್ತೊಂದು ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಯಿತು ಅದು ಯಾವುದು ಎಂದು. ಈ ಪ್ರಶ್ನೆ ಕೇಳುತ್ತಿದ್ದಂತೆ ಹಂಸಲೇಖ ಕೂಡಲೆ ಬಸವನಗುಡಿ ಎಂದರು. ಅಲ್ಲಿಗೆ ಉತ್ತರ ಸರಿಯಾಗಿತ್ತು. ರವಿಗೆ ಕೈಗೆ ರು.12, 50000 ಚೆಕ್ ಬರೆದುಕೊಟ್ಟರು ಪುನೀತ್.

ಹಾಟ್ ಸೀಟಲ್ಲಿ ಕೂಳಿತುಕೊಂಡವರ ಕಷ್ಟ ಏನೆಂಬುದು ನಿಮಗೆ ಗೊತ್ತಾಗಬೇಕಾದರೆ ಒಂದ್ಸಲ ಬಂದು ಇಲ್ಲಿ ಕುಳಿತಕೊಳ್ಳಿ, ನಿನ್ನ ಸೀಟಲ್ಲಿ ನಾನು ಕುಳಿದುಕೊಳ್ತೀನಿ. ಆಗ ನಾನು ಕೇಳೋದೆಲ್ಲಾ ಸಿಂಪಲ್ ಪ್ರಶ್ನೆಗಳು. ಹೇಳಿ ಸಾರ್ ಯಾವ ರೀತಿ ಪ್ರಶ್ನೆಗಳನ್ನು ಕೇಳ್ತೀರಾ ಎಂದು ನಗುನಗುತ್ತಲೇ ಪುನೀತ್ ಕೇಳಿದರು.

ಏನಿಲ್ಲಾ ಮದುವೆಗೂ ಮುಂಚಿನ ನಿನ್ನ ಮೂರು ಜನ ಮಾಜಿ ಲವರ್ಸ್ ಹೆಸರೇಳು ಎಂದು ಕೇಳ್ತೀನಿ ಎಂದರು. ಇದಕ್ಕೆ ನಗುನಗುತ್ತಲೇ ಉತ್ತರಿಸಿದ ಪುನೀತ್ ಮದುವೆ ಮುಂಚೆ ಅಮ್ಮ ಅಮ್ಮ ಅಮ್ಮ ಎಂದರು. ಈಗ ಮಕ್ಕಳು ಹಾಗೂ ಪತ್ನಿ ಎಂದರು. ನಾವು ಕೇಳೋ ಎಲ್ಲಾ ಪ್ರಶ್ನೆಗಳಿಗೂ ನೀನು ಹೀಗೇ ಅಪ್ಪ ಅಮ್ಮ ಎಂದು ಹೇಳಿದರೆ ಕಷ್ಟ ಆಗುತ್ತದೆ ಹಾಗಾಗಿ ನಾವೇ ಆಪ್ಷನ್ ಕೊಡ್ತೀವಿ ಅವುಗಳಲ್ಲೇ ಆಯ್ಕೆ ಮಾಡಬೇಕು ಎಂದು ಹೇಳಿ ಪುನೀತ್‌ರನ್ನೇ ಇಕ್ಕಟ್ಟಿಗೆ ಸಿಕ್ಕಿಸಿದರು. (ಒನ್‌ಇಂಡಿಯಾ ಕನ್ನಡ)[center]
Admin
Admin

Posts : 983
Join date : 2012-05-26
Age : 36
Location : Bangalore

http://sandalwood.forumotion.com

Back to top Go down

ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ Empty ಕೋಟ್ಯಧಿಪತಿಯಲ್ಲಿ ಪುನೀತ್ ಕಾಲೆಳೆದ ರವಿಚಂದ್ರನ್

Post by Admin on Sat Jun 09, 2012 9:57 am

ಕೋಟ್ಯಧಿಪತಿಯಲ್ಲಿ ಪುನೀತ್ ಕಾಲೆಳೆದ ರವಿಚಂದ್ರನ್

ಸೋಮವಾರ, ಜೂನ್ 4, 2012, 14:47 [IST]
.

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' ಗೇಮ್ ಶೋನಲ್ಲಿ ರವಿಚಂದ್ರನ್ ಭಾಗವಹಿಸಲಿದ್ದಾರೆ ಎಂಬ ಸುದ್ದಿಯನ್ನು ಈಗಾಗಲೇ ಓದಿದ್ದೀರಿ. ಆದರೆ ಆ ರಸನಿಮಿಷಗಳನ್ನು ಟಿವಿಯಲ್ಲಿ ಎಂದು ನೋಡಲಿದ್ದೀರಿ ಎಂಬ ಮಾಹಿತಿ ಬಹಿರಂಗವಾಗಿರಲಿಲ್ಲ.

ಪವರ್ ಸ್ಟಾರ್ ಪುನೀತ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಜುಗಲ್ಬಂಧಿಯ ಈ ವಿಶೇಷ ಸಂಚಿಕೆಯು ಇದೇ ಮಂಗಳವಾರ, ಅಂದರೆ ಜೂನ್ 05, 2012 ರಂದು ಪ್ರಸಾರವಾಗಲಿದೆ. ಇದು ಐವತ್ತನೇ ವಿಶೇಷ ಕಂತು. ಈ ಮೂಲಕ ರವಿಚಂದ್ರನ್ 'ಕನ್ನಡದ ಕೋಟ್ಯಧಿಪತಿ' ಶೋನಲ್ಲಿ ಭಾಗವಹಿಸುತ್ತಿರುವ ಮೂರನೇ ಸೆಲೆಬ್ರಿಟಿ ಎನಿಸಿಕೊಳ್ಳಲಿದ್ದಾರೆ.

ಇದಕ್ಕೂ ಮೊದಲು ಗೋಲ್ಡನ್ ಗರ್ಲ್ ರಮ್ಯಾ ಸಹ ಕೋಟ್ಯಧಿಪತಿ ಶೋನಲ್ಲಿ ಭಾಗವಹಿಸಿ ರು.3,20,000 (ಮೂರು ಲಕ್ಷ ಇಪ್ಪತ್ತು ಸಾವಿರ ರುಪಾಯಿ) ಗೆದ್ದಿದ್ದರು. ಇನ್ನು ಎರಡನೇ ಸೆಲೆಬ್ರಿಟಿಯಾಗಿ ಭಾಗವಹಿಸಿದ್ದವರು ಹಿರಿಯ ಪಂಚಭಾಷಾ ತಾರೆ ಲಕ್ಷ್ಮಿ. ಅಣ್ಣಾವ್ರ 84ನೇ ಹುಟ್ಟುಹಬ್ಬದ ನಿಮಿತ್ತ ಏಪ್ರಿಲ್ 24, 2012 ರಂದು ಲಕ್ಷ್ಮಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

ಸೋಮವಾರದಿಂದ ಗುರುವಾರದವರೆಗೆ ಪ್ರತಿ ರಾತ್ರಿ 8 ರಿಂದ 9.30ರ ತನಕ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮಕ್ಕೆ ಇದೀಗ ಕ್ರೇಜಿಸ್ಟಾರ್ ಆಗಮಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಪುಳಕವನ್ನುಂಟುಮಾಡಿದೆ. ಏಕೆಂದರೆ ರವಿಚಂದ್ರನ್ ಸಖತ್ ಜಾಲಿ, ಸಖತ್ ಕ್ರೇಜಿ.

ಈ ಕೋಟ್ಯಧಿಪತಿ ಐವತ್ತನೇ ವಿಶೇಷ ಕಂತಿಗಾಗಿ ರವಿಚಂದ್ರನ್ ಚೆನ್ಯೈಗೆ ಹೋಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ 'ಸ್ಪರ್ಧೆಯುದ್ದಕ್ಕೂ ರವಿಚಂದ್ರನ್, ನಿರೂಪಕ ಪುನೀತ್ ಅವರನ್ನು ಕಾಲೆಳಿದ್ದಾರೆ, ಗೇಲಿ ಮಾಡಿದ್ದಾರೆ. ಅಷ್ಟೇ ಅಲ್ಲ, ಪುನೀತ್ ಅವರನ್ನು ಸಾಕಷ್ಟು ಬಾರಿ ಛೇಡಿಸಿದ್ದಾರೆ. ಈ ಮೂಲಕ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದ್ದಾರೆ' ಎಂಬುದು ಅಲ್ಲಿ ಭಾಗವಹಿಸಿ ಬಂದವರ ಅನಿಸಿಕೆ.

ರವಿಚಂದ್ರನ್ ರಸಿಕ. ಅವರ ರಸಿಕತೆ ಬಗ್ಗೆ ಗೊತ್ತಲ್ಲದವರು ಇರಲಿಕ್ಕಿಲ್ಲ. ಈ ಹಿಂದೆ ಪುನೀತ್ ಜೊತೆ ಮಾತನಾಡುತ್ತಾ "ಕನ್ನಡದ ಕೋಟ್ಯಾಧಿಪತಿಗೆ ಬಂದಿದ್ದ ರಮ್ಯಾಗೆ ಮಾತು ಮಾತಿನಲ್ಲೇ ಕಣ್ಣು ಹೊಡೆದದ್ದು, ರೇಗಿಸಿದ್ದು ಎಲ್ಲಾ ನೋಡ್ದೆ"ಎಂದು ತಮಾಷೆಯಾಗಿ ರೇಗಿಸಿ ತಮ್ಮ 'ನೋಡ್ದೆ ನೋಡ್ದೆ ನೋಡಬಾರದ್ದನ್ನ ನೋಡ್ದೆ' ಎಂಬ ತಮ್ಮದೇ ಹಾಡನ್ನು ನೆನಪಿಸಿದ್ದರು. ಈಗ ಸ್ವತಃ ಅವರೇ ಶೋನಲ್ಲಿ ಭಾಗವಹಿಸುತ್ತಿರುವಾಗ ಪುನೀತ್ ಅವರನ್ನು ಅದೆಷ್ಟು ಗೋಳುಹುಯ್ದುಕೊಂಡಿದ್ದಾರೋ!

ತಮ್ಮ ಸಿನಿಮಾಯಾನದ ಸಾಕಷ್ಟು ನೆನಪುಗಳನ್ನು, ಅನುಭವಗಳನ್ನು ಈ ವೇದಿಕೆಯಲ್ಲಿ ರವಿಚಂದ್ರನ್ ಹಂಚಿಕೊಂಡಿದ್ದಾರಂತೆ. ಜೊತೆಗೆ, ತಮ್ಮ ತಂದೆ ವೀರಾಸ್ವಾಮಿ, ತನ್ನ ಬೆಳವಣಿಗೆಗೆ ಹೇಗೆ ಅಕ್ಷರಶಃ ಬೆನ್ನೆಲುಬಾಗಿ ನಿಂತರು ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರಂತೆ ಈ ನಮ್ಮ ಕ್ರೇಜಿಸ್ಟಾರ್.

ಪುನೀತ್ ಹಾಗೂ ರವಿಚಂದ್ರನ್ ಜುಗಲ್ಬಂದಿಯ ಈ ಕಾರ್ಯಕ್ರಮವನ್ನು ನೋಡಲು ಕನ್ನಡದ ಕಿರುತೆರೆ ಪ್ರೇಕ್ಷಕರು ಮಾತ್ರವಲ್ಲ, ಸಿನಿಪ್ರೇಕ್ಷಕರೂ ಕಾದುಕುಳಿತಿದ್ದಾರೆ. ಇನ್ನೇನು ನಾಳೆ 8 ಗಂಟೆಗೆ ಟಿವಿ ಮುಂದೆ ಕುಳಿತರಾಯಿತು, ಕ್ರೇಜಿಸ್ಟಾರ್ ಹಾಗೂ ಪವರ್ ಸ್ಟಾರ್ ಅವರ ಐವತ್ತರ ವಿಶೇಷ ಸಂಚಿಕೆ ಹಬ್ಬವನ್ನು ನೋಡಬಹುದು. (ಒನ್ ಇಂಡಿಯಾ ಕನ್ನಡ)
Admin
Admin

Posts : 983
Join date : 2012-05-26
Age : 36
Location : Bangalore

http://sandalwood.forumotion.com

Back to top Go down

ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ Empty ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

Post by Admin on Tue Jun 12, 2012 11:29 pm

ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ


ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ ಗೇಮ್ ಶೋ 'ಕನ್ನಡದ ಕೋಟ್ಯಧಿಪತಿ'ಗೆ ಈ ಬಾರಿಯ ಸೆಲೆಬ್ರಿಟಿಯಾಗಿ ಮಾಜಿ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಅನಿಲ್ ರಾಧಾಕೃಷ್ಣ ಕುಂಬ್ಳೆ ಬರುತ್ತಿದ್ದಾರೆ. ಈ ವಿಶೇಷ ಕಾರ್ಯಕ್ರಮ ಇದೇ ಬುಧವಾರ (ಜೂ.13) ಹಾಗೂ ಗುರುವಾರ (ಜೂ.14)ರಂದು ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಸಮಯ ಗೊತ್ತೇ ಇದೆಯಲಾ, ರಾತ್ರಿ 8 ಗಂಟೆಗೆ ಈ ವಿಶೇಷ ಕಾರ್ಯಕ್ರಮವನ್ನು ನೋಡಿ ಆನಂದಿಸಬಹುದು. ಈ ಗೇಮ್ ಶೋನಲ್ಲಿ ಕೇವಲ ಆಟವಷ್ಟೇ ಇರುವುದಿಲ್ಲ. ಆಟದ ಜೊತೆಗೆ ಒಂದಷ್ಟು ತಮಾಷೆ, ಹಾಡು ಹರಟೆ, ಪುನೀತ್ ಅವರ ಡೈಲಾಗ್ಸ್ ಎಲ್ಲವನ್ನೂ ನೋಡಿ ಸವಿಯಬಹುದು. ವಿಡಿಯೋದಲ್ಲಿ ನೋಡಿ ಕುಂಬ್ಳೆಗೆ ಪುನೀತ್ ಗೂಗ್ಲಿ.

ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ಗಳನ್ನು ತೆಗೆದುಕೊಂಡು ವಿಶ್ವದ ಎರಡನೇ ಆಟಗಾರ, ಕನ್ನಡದ ಕುವರ ಅನಿಲ್ ಕುಂಬ್ಳೆ (ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್). ಶೋನಲ್ಲಿ ಅವರು ಪುನೀತ್‌ಗೆ ಬೌಲಿಂಗ್‌ನ ಒಂದಷ್ಟು ತಂತ್ರಗಳನ್ನೂ ಕಲಿಸಿದ್ದಾರೆ. ಪುನೀತ್ ಕೂಡ ಅಷ್ಟೇ ಕುಂಬ್ಳೆಗೆ ಒಂದಷ್ಟು ಅಭಿನಯದ ಟ್ರಿಕ್ಸ್ ಹೇಳಿಕೊಟ್ಟಿದ್ದಾರೆ.

ಆಟದ ಮೈದಾನದಲ್ಲಿ ಕುಂಬ್ಳೆ ಅವರ ಮಾಂತ್ರಿಕ ಕೈಚಳಕವನ್ನಷ್ಟೇ ನೋಡಿದವರು ಶೋನಲ್ಲಿ ಅವರನ್ನು ಮತ್ತೊಂದು ಕೋನದಿಂದ ಅಳೆಯಬಹುದು. ಈ ಶೋನಲ್ಲಿ ಕುಂಬ್ಳೆ ಅವರು "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ..." ಎಂಬ ಪುನೀತ್ ಅವರ 'ಮಿಲನ' ಚಿತ್ರದ ಹಾಡನ್ನೂ ಹಾಡಿ ರಂಜಿಸಿದ್ದಾರೆ.

ಈ ವಿಶೇಷ ಸಂಚಿಕೆಯಲ್ಲಿ ಕುಂಬ್ಳೆ ಎಷ್ಟು ಹಣ ಗೆದ್ದಿದ್ದಾರೆ ಎಂಬುದು ಗೊತ್ತಾಗಬೇಕಾದರೆ ಬುಧವಾರದ ಶೋ ಖಂಡಿತ ನೋಡಲೇ ಬೇಕು. ಹಾಟ್ ಸೀಟ್‌ನಲ್ಲಿ ಕೂತಿರುವ ಕುಂಬ್ಳೆಗೆ ಪುನೀತ್ ಯಾವ ರೀತಿ ಗೂಗ್ಲಿ ಎಸೆದಿದ್ದಾರೆ ಎಂಬುದು ಇಂಟರೆಸ್ಟಿಂಗ್ ವಿಚಾರ.

ಅನಿಲ್ ಕುಂಬ್ಳೆಗೆ ಜುಂಬೋ("Jumbo") ಎಂಬ ಅಡ್ಡಹೆಸರು ಇದೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್‌ಗೆ ಹೋಲಿಸಿ, ಇವರನ್ನು ಜುಂಬೋ ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್‌ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.

ಈ ಹಿಂದೆ ಹಲವಾರು ಸೆಲೆಬ್ರಿಟಿಗಳು 'ಕೋಟ್ಯಧಿಪತಿ' ಶೋನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಗೋಲ್ಡನ್ ಗರ್ಲ್ ರಮ್ಯಾ, ಹಿರಿಯ ತಾರೆ ಲಕ್ಷ್ಮಿ, ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಶೋನಲ್ಲಿ ಭಾಗವಹಿಸಿ ಗಮನಸೆಳೆದಿದ್ದರು. ಈ ಬಾರಿ ಅನಿಲ್ ಕುಂಬ್ಳೆ ಕೂಡ ಯಾವ ರೀತಿ ಉತ್ತರಿಸಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. (ಒನ್‌ಇಂಡಿಯಾ ಕನ್ನಡ)
Admin
Admin

Posts : 983
Join date : 2012-05-26
Age : 36
Location : Bangalore

http://sandalwood.forumotion.com

Back to top Go down

ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ Empty Re: ಕೋಟ್ಯಧಿಪತಿಯಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

Post by Sponsored content


Sponsored content


Back to top Go down

Back to top


 
Permissions in this forum:
You cannot reply to topics in this forum